The birth of Akhila Karnataka Brahmana Mahasabha, Mysore District
ಪೂಜೆ, ಪುನಸ್ಕಾರ ಮಾತ್ರವಲ್ಲದೆ ಜೀವನದ ಪ್ರಮುಖ ಘಟ್ಟದಲ್ಲಿ ಧಾರ್ಮಿಕ ವಿಧಿ ವಿಧಾನಗಳನ್ನು ಬೋಧಿಸುವ, ಆಚರಿಸುವ ಹಾಗೂ ಸಂಪ್ರದಾಯ ಪಾಲನೆಯಲ್ಲಿ ಬ್ರಾಹ್ಮಣ ಸಮುಧಾಯ ಯಾವುದೇ ರೀತಿಯಲ್ಲಿ ಸದೃಢ ಸಂಘಟನೆ ಹೊಂದಿರಲಿಲ್ಲ. ಈ ಕೊರತೆಯನ್ನು ರಾಜ್ಯಮಟ್ಟದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ನಿವಾರಿಸಿದೆ. ಇದೀಗ ಮಹಾಸಭಾ ರಾಜ್ಯದಾದ್ಯಂತ ತನ್ನ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಿದ್ದು ಸಂಘಟನೆಗೆ ಮತ್ತಷ್ಟು ಶಕ್ತಿ ನೀಡುತ್ತಿದೆ. ಅದರಲ್ಲೂ ಮುಖ್ಯವಾಗಿ ಮೈಸೂರು ಪ್ರಾಂತ್ಯದಲ್ಲಿ ಮಹಾಸಭಾ ಬಹಳ ಚಟುವಟಿಕೆಯಿಂದ ಕಾರ್ಯ ನಿರ್ವಹಿಸುತ್ತಿದೆ.
ಈ ಹಿಂದೆ 1981-82 ಸಾಲಿನಲ್ಲಿ ಬ್ರಾಹ್ಮಣ ಧರ್ಮ ಸಹಾಯ ಸಭಾ (ರಿ) ಎಂಬ ಸಂಘಟನೆ ಅಸ್ತಿತ್ವದಲ್ಲಿತ್ತು. ಈ ಸಂಘದಲ್ಲಿ ಪದಾಧಿಕಾರಿಗಳಾಗಿದ್ದ ಎಸ್.ಕೃಷ್ಣಮೂರ್ತಿ, ಎಂ. ಆರ್. ಶ್ರೀಪಾದರಾವ್ ಹಾಗೂ ನಾಗರಾಜರಾವ್ ಅವರು ಅಪರ ಕರ್ಮಕ್ಕೆ ಸೀಮಿತವಾಗಿದ್ದ ಕಾರ್ಯ ಚಟುವಟಿಕೆಯನ್ನು ಸಂಘಟನೆ, ಸ್ವಾವಲಂಬನೆ ಮತ್ತು ಸುಧಾರಣೆ ತತ್ವಗಳ ಆಧಾರದಲ್ಲಿ ಸಂಘಟನೆಗೆ ಹೊಸ ರೂಪ ನೀಡಲು ಯುವಕ ಸಂಘವನ್ನು ಹುಟ್ಟುಹಾಕಿದರು. ಯುವಕ ಸಂಘದಲ್ಲಿ ಎಂ. ವಿ. ವೆಂಕಟೇಶಮೂರ್ತಿ, ವಿ.ಹರೀಶ್, ಎಂ.ಆರ್.ಬಾಲಕೃಷ್ಣ, ಟಿ.ಪಿ.ಶ್ರೀನಾಥ್, ನಂ. ಶ್ರೀಕಂಟ ಕುಮಾರ್, ನಂಜುಂಡ ಪ್ರಸಾದ್, ನರಹರಿ ಜೋಯಿಸ್, ಎಂ.ಆರ್.ಕೇಶವಪ್ರಸಾದ್, ಟಿ.ಪಿ.ವಾಣಿ, ಚಂದ್ರಿಕಾ, ಟಿ.ಪಿ.ಮೀರ, ಟಿ.ಪಿ. ವಾಣಿ, ನಂದಿನಿ ಅವರನ್ನು ಒಳಗೊಂಡಂತೆ 50ಕ್ಕೂ ಹೆಚ್ಚು ಮಂದಿ ಇದ್ದರು. ಈ ಯುವಜನರ “ಬ್ರಾಹ್ಮಣ ಯುವ ಸಂಘಟನ” ಎಂಬ ಸಂಸ್ಥೆಯನ್ನು ಅಂದಿನ ಮುಖ್ಯಮಂತ್ರಿ ಶ್ರೀ. ಗುಂಡುರಾವ್ ಉದ್ಘಾಟಿಸಿದರು.
ಬ್ರಾಹ್ಮಣ ಯುವಕ ಸಂಘವು ಮುಂದಿನ ದಿನಗಳಲ್ಲಿ ಮೈಸೂರಿನಲ್ಲಿ ಬೃಹತ್ ಸಮಾವೇಶಗಳನ್ನು ಹಾಗೂ ವಿಪ್ರಬಾಂಧವರಿಗೆ ಅನುಕೂಲವಾಗುವಂತಹ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿತು. ನಂತರ ಅಖಿಲ ಕರ್ನಾಟಕ ಮಹಾಸಭಾ (ರಿ) ಬೆಂಗಳೂರಿನಲ್ಲಿ ನಡೆಸಿದ 4ನೇ ಸಮ್ಮೇಳನದಿಂದ ಸಕ್ರಿಯವಾಗಿ ಪಾಲ್ಗೊಂಡು ಮೈಸೂರಿನಲ್ಲಿ ಅಪಾರ ಸಂಖ್ಯೆಯ ವಿಪ್ರರನ್ನು ರಾಜ್ಯ ಮಹಾಸಭೆಗೆ ಆಜೀವ ಸದಸ್ಯರನ್ನಾಗಿ ಮಾಡಿಸಲಾಯಿತು. ನಂತರ ಮೈಸೂರು ಜಿಲ್ಲಾ ಶಾಖೆಯ ವತಿಯಿಂದ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದೆ.
2009 -10 ನೇ ಸಾಲಿಗೆ ಅಖಿಲ ಕರ್ನಾಟಕ ಮಹಾಸಭಾದ ಮೈಸೂರು ಶಾಖೆಗೆ ಉತ್ಸಾಹಿ, ಉದ್ಯಮಿ, ಅನುಭವಿ, ಸಂಘಟನಾ ಶಕ್ತಿಯುಳ್ಳ ಬಿ.ಎಲ್.ನಾಗೇಂದ್ರ ಪ್ರಸಾದ್ ಅವರನ್ನು ಸಭಾಪತಿಗಳನ್ನಾಗಿ ಆಯ್ಕೆ ಮಾಡಲಾಗಿದೆ. ಅವರ ಸಂಘಟನಾ ಚಾತುರ್ಯ ಸಂಘಟನೆಗೆ ಹೊಸ ಉತ್ತೇಜನ ನೀಡಿದೆ. ಮಹಾಸಭಾದ ಚಟುವಟಿಕೆಗಳಿಗೆ ಇದರಿಂದ ಹೊಸ ಉತ್ತೇಜನ ದೊರೆತಿದೆ.
ಅಖಿಲ ಕರ್ನಾಟಕ ಮಹಾಸಭಾದ ಮೈಸೂರು ಶಾಖೆಯ ಮುಂದಿನ ಯೋಜನೆಗಳ ಕುರಿತು ಅವರು “ಉದ್ಯೋಗ ಹಾಗು ಆರೋಗ್ಯಕ್ಕೆ ನಾವು ಹೆಚ್ಚು ಆದ್ಯತೆ ನೀಡುತ್ತೇವೆ. ಈ ಕುರಿತಂತೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಯೋಜನೆ ಹೊಂದಿದ್ದೇವೆ. ಅದಕ್ಕಾಗಿ ವಿವಿಧ ಆರೋಗ್ಯ ಶಿಬಿರಗಳು, ಶೈಕ್ಷಣಿಕ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದ್ದೇವೆ. ಸಂಘಕ್ಕೆ ನಮ್ಮದೇ ಆದ ಕಟ್ಟಡವನ್ನೂ ನಿರ್ಮಿಸಿಕ್ಕೊಳ್ಳುವ ಉದ್ದೇಶ ಹೊಂದಿದ್ದೇವೆ” ಎಂದು ಅವರು ತಮ್ಮ ಯೋಜನೆಗಳ ಬಗ್ಗೆ ವಿವರಿಸುತ್ತಾರೆ.
ಒಟ್ಟಿನಲ್ಲಿ “ಮಾನವ ಸಮುದಾಯದ ಸೇವೆಯೇ ನಮ್ಮ ಧ್ಯೇಯ” ಎಂದು ಅವರು ಸಂಘದ ಗುರಿಯ ಕುರಿತು ಒಂದೇ ಮಾತಿನಲ್ಲಿ ವಿವರಿಸುತ್ತಾರೆ.